ತುಮಕೂರು ಜಿಲ್ಲೆಯಲ್ಲಿನ ಪ್ರಮುಖ ಬೆಳೆ ತೆಂಗು. ತೆಂಗಿನ ಕಾಯಿ ಅಥವಾ ಎಳನೀರು ಕೊಯ್ಲು ಮಾಡುವ ಗೊನೆಗಾರರು ಅನೇಕ ಬಾರಿ ಅಪಘಾತಗಳಿಗೆ ತುತ್ತಾಗುತ್ತಾರೆ. ಇಂತಹ ಗೊನೆಗಾರರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ವಿಮಾ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ವಿಮಾ ಯೋಜನೆಯ ಮಾಹಿತಿ, ಬೇಕಾಗುವ ದಾಖಲೆಗಳ ಕುರಿತು ಮಾಹಿತಿಯನ್ನು ನೀಡಲಾಗಿದೆ.
‘ಗೊನೆಗಾರರಿಗೆ ಕೇರಾ ಸುರಕ್ಷಾ ವಿಮಾ ಯೋಜನೆ‘ ಎಂಬ ಹೆಸರಿನಲ್ಲಿ ತೆಂಗಿನ ಕಾಯಿ ಅಥವಾ ಎಳನೀರು ಕೊಯ್ಲು ಮಾಡುವ ಅನುಭವಿ ಗೊನೆಗಾರರಿಗೆ ವಿಮಾ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಸುಲಭ ಕಂತುಗಳನ್ನು ಪಾವತಿ ಮಾಡುವ ಮೂಲಕ ಗೊನೆಗಾರರು ಈ ವಿಮಾ ಯೋಜನೆಯ ಸೌಲಭ್ಯವನ್ನು ಪಡೆಯಬಹುದಾಗಿದೆ.
ವಿಮಾ ಯೋಜನೆಯ ಉದ್ದೇಶಗಳು:
ಗೊನೆಗಾರರಿಗೆ ಕೇರಾ ಸುರಕ್ಷಾ ವಿಮಾ ಯೋಜನೆಯು ವೈಯಕ್ತಿಕ ಅಪಘಾತ ವಿಮಾ ಯೋಜನೆ ಆಗಿದ್ದು, ತೆಂಗು ಅಭಿವೃದ್ಧಿ ಮಂಡಳಿಯವರು ದಿ ನ್ಯೂ ಇಂಡಿಯಾ ವಿಮಾ ಕಂಪನಿಯ ಸಹಯೋಗದಲ್ಲಿ, ಅನುಷ್ಠಾನಗೊಳಿಸುತ್ತಿದ್ದಾರೆ. ತುಮಕೂರು ಜಿಲ್ಲೆಯಲಿ, ಸುಮಾರು 224507 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದ್ದು, ಇದರಲಿ, ಹೆಚ್ಚಿನ ಪಾಲು ತೆಂಗು ತೋಟಗಾರಿಕೆಗೆ ಕಾಯಿ ಅಥವಾ ಎಳನೀರು ಕೊಯ್ದು, ಮಾಡುವ ಅನುಭವಿ ಗೊನೆಗಾರರು ಬೇಕಾಗಿರುತ್ತದೆ. ಆದಕಾರಣ ಏನೇ ಅಪಘಾತ ಸಂಭವಿಸಿದರೂ ಕೇರಾ ಸುರಕ್ಷಾ ವಿಮಾ ಯೋಜನೆಯಡಿಯಲ್ಲಿ ವಿವಿಧ ಸೌಲಭ್ಯಗಳು ಲಭ್ಯವಿರುತ್ತವೆ.
ತೆಂಗಿನ ಮರ ಹತ್ತುವವರು/ ತೆಂಗಿನಕಾಯಿ ಕೀಳುವವರು/ ನೀರಾ ತಂತ್ರಜ್ಞರು ಅಪಘಾತಕ್ಕೊಳಗಾಗಿ ಮರಣ ಹೊಂದಿದ್ದಲ್ಲಿ ಅಥವಾ ಅಂಗವಿಕಲರಾದಲ್ಲಿ ವಿಮಾ ಕಂಪನಿಯಿಂದ ದೊರಕುವ ವಿಮಾ ಮೊತ್ತದ ಆರ್ಥಿಕ ಸಹಾಯದ ಮಾಹಿತಿ ನೀಡಲಾಗಿದೆ. (ದುರ್ಘಟನೆ/ ಅಪಘಾತ ಆದ 7 ದಿನಗಳ ಒಳಗಾಗಿ ತೆಂಗು ಅಭಿವೃದ್ಧಿ ಮಂಡಳಿಗೆ ಮಾಹಿತಿ ತಲುಪಬೇಕಾಗುತ್ತದೆ).
- ಮರಣ ಹೊಂದಿದ್ದಲ್ಲಿ 5 ಲಕ್ಷ ರೂ. ಗಳು
- ಶಾಶ್ವತ ಭಾಗಶಃ ಅಂಗವಿಕಲತೆ ಹೊಂದಿದ್ದಲ್ಲಿ 2.50 ಲಕ್ಷ ರೂ. ಗಳು
- ಆಸ್ಪತ್ರೆ ವೆಚ್ಚ (24 Hours IP) 1 ಲಕ್ಷ ರೂ. ಗಳು (ಗರಿಷ್ಠ)
- ತಾತ್ಕಾಲಿಕ ಅಂಗವಿಕಲತೆಯನ್ನು ಹೊಂದುವ ಕೊಯ್ಲುಗಾರನಿಗೆ ಗರಿಷ್ಠ ರೂ. 18000 (ರೂ. 3000 ಪ್ರತಿ ವಾರ)
- ಆಂಬುಲೆನ್ಸ್ ಖರ್ಚು ರೂ. 3000 ಹಾಗೂ ಪಾಲಿಸಿದಾರ ಮೃತಪಟ್ಟರೆ ಅಂತ್ಯಸಂಸ್ಕಾರಕ್ಕೆ ರೂ. 5000