ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, 2025ನೇ ಋತುವಿಗೆ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಹೆಚ್ಚಿಸಲು ಶುಕ್ರವಾರ ನಡೆದ ಕೇಂದ್ರ ಸಚಿವಸಂಪುಟಸಭೆ ಅನುಮೋದಿಸಿದೆ.
ಪ್ರತಿ ಕ್ವಿಂಟಲ್ ಉಂಡೆ ಕೊಬ್ಬರಿಗೆ 100 ರೂ. ಹಾಗೂ ಹೋಳಾದ (ಮಿಲ್ಲಿಂಗ್) ಕೊಬ್ಬರಿಗೆ ರೂ.420 ದರ ಹೆಚ್ಚಿಸಲಾಗಿದೆ. ಈ ಮೂಲಕ ಕ್ವಿಂಟಲ್ ಉಂಡೆ ಕೊಬ್ಬರಿಗೆ 12,100 ರೂ. ಹಾಗೂ ಹೋಳಾದ ಕೊಬ್ಬರಿಗೆ 11,582 ರೂ. ಬೆಂಬಲ ಬೆಲೆ ನಿಗದಿಪಡಿಸಲು 855 ಕೋಟಿ ರೂಪಾಯಿಗಳ ಅನುದಾನವನ್ನು ಮೀಸಲಿಡಲಾಗಿದೆ.
ಇಡೀ ದೇಶದ ಕೊಬ್ಬರಿ ಉತ್ಪಾದನೆ ಪೈಕಿ ಕರ್ನಾಟಕದ ಪಾಲು ಶೇ.32.7 ರಷ್ಟಿದೆ. ತಮಿಳುನಾಡು ಶೇ.25.7 ಹಾಗೂ ಕೇರಳ ಶೇ. 25.4ರಷ್ಟು ಪಾಲು ಹೊಂದಿವೆ.