ರೈತರು ಬೆಳೆ ಬೆಳೆಯುವುದರಿಂದಲೇ ಮನುಜಕುಲ ಶಾಂತಿಯಿಂದ ಜೀವನ ನಡೆಸಲು ಸಾಧ್ಯ ಎಂದು ನಗರದ ಹೊಸ ಸೇತುವೆ ರಸ್ತೆ, ಸಿದ್ದಾರೂಢ ನಗರದಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಯ್ಯ ವಿದ್ಯಾ ಸಂಸ್ಥೆ ಅಧ್ಯಕ್ಷ ಬಿ. ಸಿದ್ದಬಸವ ಹೇಳಿದರು. ಅವರು ವಿದ್ಯಾಸಂಸ್ಥೆಯಲ್ಲಿ ಆಯೋಜಿಲಸಲಾಗಿದ್ದ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅನ್ನ ನೀಡುವ ರೈತರನ್ನು ಪ್ರತಿಯೊಬ್ಬರು ಗೌರವಿ ಸುವುದು ಕರ್ತವ್ಯವಾಗಿದೆ ಎಂದರು.
ಪ್ರಗತಿಪರ ರೈತರಾದ ಎ. ಪ್ರಕಾಶ್, ಅರಳಿಹಳ್ಳಿ ಹಾಗೂ ಜಿ.ಗೋಪಾಲ್ ತಳ್ಳಿಕಟ್ಟೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಗತಿಪರ ರೈತ ಪ್ರಕಾಶ್ ಅವರು, ಕೃಷಿಯ ಐತಿಹಾಸಿಕ ಹಿನ್ನೆಲೆ ಕೃಷಿ ಚಟುವಟಿಕೆಯ ಅದ್ಭುತಾವಕಾಶಗಳನ್ನು ಹೊಂದಿದೆ. ಕೃಷಿ ಕೇವಲ ಮನುಜಕುಲಕ್ಕೆ ಮಾತ್ರವಲ್ಲ, ಸಕಲ ಜೀವರಾಶಿಗಳಿಗೂ ಅಗತ್ಯ ಎಂದರು. ಗೋಪಾಲ್ ಅವರು ಕೃಷಿ ಚಟುವಟಿಕೆಯ ನೈಜ ಚಿತ್ರಣ ತೆರೆದಿಡುವ ಮೂಲಕ ರೈತರು ಎದುರಿಸುವ ಸಂಕಷ್ಟಗಳು,ಸವಾಲುಗಳನ್ನು ವಿವರಿಸಿದರು.
ಮೂಲ: ಕನ್ನಡಪ್ರಭ