ತೆಂಗಿನ ಕಾಯಿ, ಎಳನೀರು ಕೊಯ್ಲು ಮಾಡುವವರಿಗೆ ವಿಮಾ ಯೋಜನೆ, ವಿವರಗಳು
ತುಮಕೂರು ಜಿಲ್ಲೆಯಲ್ಲಿನ ಪ್ರಮುಖ ಬೆಳೆ ತೆಂಗು. ತೆಂಗಿನ ಕಾಯಿ ಅಥವಾ ಎಳನೀರು ಕೊಯ್ಲು ಮಾಡುವ ಗೊನೆಗಾರರು ಅನೇಕ ಬಾರಿ ಅಪಘಾತಗಳಿಗೆ ತುತ್ತಾಗುತ್ತಾರೆ. ಇಂತಹ ಗೊನೆಗಾರರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ವಿಮಾ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ವಿಮಾ ಯೋಜನೆಯ ಮಾಹಿತಿ, ಬೇಕಾಗುವ ದಾಖಲೆಗಳ ಕುರಿತು ಮಾಹಿತಿಯನ್ನು ನೀಡಲಾಗಿದೆ. ‘ಗೊನೆಗಾರರಿಗೆ ಕೇರಾ ಸುರಕ್ಷಾ ವಿಮಾ ಯೋಜನೆ‘ ಎಂಬ ಹೆಸರಿನಲ್ಲಿ ತೆಂಗಿನ ಕಾಯಿ ಅಥವಾ ಎಳನೀರು ಕೊಯ್ಲು ಮಾಡುವ ಅನುಭವಿ ಗೊನೆಗಾರರಿಗೆ ವಿಮಾ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಸುಲಭ ಕಂತುಗಳನ್ನು ಪಾವತಿ ಮಾಡುವ ಮೂಲಕ ಗೊನೆಗಾರರು ಈ ವಿಮಾ ಯೋಜನೆಯ ಸೌಲಭ್ಯವನ್ನು ಪಡೆಯಬಹುದಾಗಿದೆ. ವಿಮಾ ಯೋಜನೆಯ ಉದ್ದೇಶಗಳು: ಗೊನೆಗಾರರಿಗೆ ಕೇರಾ ಸುರಕ್ಷಾ ವಿಮಾ ಯೋಜನೆಯು ವೈಯಕ್ತಿಕ ಅಪಘಾತ ವಿಮಾ ಯೋಜನೆ ಆಗಿದ್ದು, ತೆಂಗು ಅಭಿವೃದ್ಧಿ ಮಂಡಳಿಯವರು ದಿ ನ್ಯೂ ಇಂಡಿಯಾ …