ಬೆಳೆ ನಷ್ಟ ಪರಿಹಾರ ಬೇಡಿಕೆಗೆ ಸಿಗದ ಸ್ಪಂದನೆ: ಕೇಂದ್ರದ ವಿರುದ್ಧ ರಾಜ್ಯದ ಸಂಘರ್ಷ
ಫೆಂಗಲ್ ಚಂಡಮಾರುತದ ವೇಳೆ ಸುರಿದ ಮಳೆಯಿಂದ ಬೆಳೆ ಹಾಳಾಗಿ ರೈತ ಸಮುದಾಯ ತೀವ್ರ ನಷ್ಟ ಅನುಭವಿಸಿದೆ. ಈ ನಷ್ಟ ಪರಿಹಾರಕ್ಕೆ ಸ್ಪಂದಿಸದ ಕೇಂದ್ರದ ಧೋರಣೆ ವಿರುದ್ಧ ಹೋರಾಟದ ಹಾದಿ ತುಳಿಯಲು ರಾಜ್ಯ ಸರಕಾರ ನಿರ್ಧರಿಸಿದೆ.ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ಒಟ್ಟಾರೆ 1,51,084 ಹೆಕ್ಟೇರ್ ಬೆಳೆ ನಷ್ಟವಾಗಿದೆ. ಇದಕ್ಕೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್‌ಡಿಆರ್‌ಎಫ್) ಪರಿಹಾರ ನೀಡುವಂತೆ ವಿಧಾನಮಂಡಲ ಅಧಿವೇಶನದಲ್ಲಿ ಗೊತ್ತುವಳಿ ಅಂಗೀಕರಿಸಲು ರಾಜ್ಯ ಸರಕಾರ ನಿರ್ಧರಿಸಿದೆ.
ತೊಗರಿ ಬೆಳೆದ ವಿಜಯಪುರ-ಕಲಬುರಗಿಯ ರೈತರು ಸಂಕಷ್ಟದಲ್ಲಿ:
ಹೆಚ್ಚಿನ ಪ್ರದೇಶದಲ್ಲಿ ತೊಗರಿ ಕಾಯಿ ಬಿಡದೆ ಗಿಡಗಳು ಮಾತ್ರ ಬೆಳೆದಿವೆ. ಇನ್ನೊಂದು ವಾರ ಕಳೆದರೆ ಕೊಯ್ಲು ಶುರುವಾಗಲಿದೆ. ಎಕರೆಗೆ 10-12 ಸಾವಿರ ರೂ. ಖರ್ಚು ಮಾಡಿದ್ದು, 1 ಕ್ವಿಂಟಾಲ್ ಕೂಡ ತೊಗರಿ ಕಾಳು ಬಾರದ ಸ್ಥಿತಿ ಇದೆ. ಹೀಗಾಗಿ ಕೊಯ್ಲು ಮಾಡಬೇಕೇ? ಬೇಡವೇ? ಎಂಬ ಆತಂಕದಲ್ಲಿ ರೈತರಿದ್ದಾರೆ.ಕೃಷಿ ಇಲಾಖೆಯೇ ಕೊಟ್ಟ ಬೀಜವನ್ನು ಬಿತ್ತಲಾಗಿತ್ತು. ಕಾಯಿ ಕಾಳುಗಟ್ಟುವ ಮುನ್ನವೇ ಬೆಳೆ ಒಣಗಿದೆ,'' ಎಂದು ರೈತರು ದೂರುತ್ತಿದ್ದಾರೆ. ಆದರೆ, ಕೆಲ ರೈತರು ಸಂಗ್ರಹಿಸಿಟ್ಟು ಬಿತ್ತಿದ್ದ ತೊಗರಿ ಬೀಜ ಉತ್ತಮ ಫಸಲು ಬಿಟ್ಟಿದೆ ಎಂದು ರೈತರು ಹೇಳಿದ್ದಾರೆ.
ಸಮೃದ್ಧ ಮಳೆಯಾಗಿದ್ದರಿಂದ ಬಂಪರ್ ತೊಗರಿ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ನಷ್ಟದ ಆತಂಕ ಎದುರಾಗಿದೆ. ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆ ತೊಗರಿ ಹುಲುಸಾಗಿ ಬೆಳೆದರೂ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಕಾಯಿ ಬಿಡದೆ ರೈತರು ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಹೇರಳ ಮಳೆಯಾಗಿದ್ದರಿಂದ ಕಲಬುರಗಿ, ವಿಜಯಪುರ ಸೇರಿದಂತೆ ಉತ್ತರದ ಬಹುತೇಕ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ. ಈಗ ರಾಜ್ಯದ 2ನೇ ತೊಗರಿ ಕಣಜ ವಿಜಯಪುರ ಹಾಗೂ ನೆರೆಯ ಜಿಲ್ಲೆಗಳಲ್ಲಿ ಬೆಳೆ 7 ಅಡಿ ಎತ್ತರಕ್ಕೆ ಹುಲುಸಾಗಿ ಬೆಳೆದಿದ್ದರೂ ಸರಿಯಾಗಿ ಕಾಯಿಯೇ ಬಿಟ್ಟಿಲ್ಲ. ಹೆಚ್ಚಿನ ಪ್ರದೇಶದಲ್ಲಿ ತೊಗರಿ ಕಾಯಿ ಬಿಡದೆ ಗಿಡಗಳು ಮಾತ್ರ ಬೆಳೆದಿವೆ. ಇನ್ನೊಂದು ವಾರ ಕಳೆದರೆ ಕೊಯ್ಲು ಶುರುವಾಗಲಿದೆ. ಎಕರೆಗೆ 10-12 ಸಾವಿರ ರೂ. ಖರ್ಚು ಮಾಡಿದ್ದು, 1 ಕ್ವಿಂಟಾಲ್ ಕೂಡ ತೊಗರಿ ಕಾಳು ಬಾರದ ಸ್ಥಿತಿ ಇದೆ. ಹೀಗಾಗಿ ಕೊಯ್ಲು ಮಾಡಬೇಕೇ? ಬೇಡವೇ? ಎಂಬ ಆತಂಕದಲ್ಲಿ ರೈತರಿದ್ದಾರೆ.ಅನೇಕ ರೈತರು ಬೆಳೆ ಕಟಾವು ಮಾಡದೆ ಆಡು, ಕುರಿಗಳಿಗೆ ಮೇವಾಗಿ ತಿನ್ನಿಸುತ್ತಿದ್ದಾರೆ. ಕೊಯ್ಲು ಮಾಡಿ ರಾಶಿ ಮಾಡಬೇಕೆಂದರೂ ಹಣ ಖರ್ಚು ಮಾಡಬೇಕು. ಕೂಲಿಯ ಖರ್ಚು ಕೂಡ ಬರೋದು ಕಷ್ಟ. ಒಣಗಲು ಬಿಡೋ ಬದಲು ಕುರಿ-ಮೇಕೆಗೆ ಮೇವಾಗಿ ಕೊಡುತ್ತಿದ್ದೇವೆ ಎಂಬುದು ನೊಂದ ರೈತರ ಅಳಲು.
ಕಳಪೆ ಬೀಜದ ಆರೋಪ:
ಎಷ್ಟೇ ಮಳೆ, ಬಿಸಿಲು ಬಂದರೂ ತಾಳುವ ಶಕ್ತಿಯಿರುವ ತಳಿಯೆಂದು ಕೃಷಿ ಇಲಾಖೆ ವಿತರಿಸಿದ ಜಿಆರ್‌ಜಿ 152 ಹಾಗೂ ಜಿಆರ್‌ಜಿ 811 ತೊಗರಿ ಬೀಜ ಸರಿಯಾಗಿ ಕಾಯಿ ಬಿಟ್ಟಿಲ್ಲ. ಶೇ.20-30ರಷ್ಟು ಮಾತ್ರ ಕಾಯಿ ಬಿಟ್ಟಿದೆ.ವಿಜಯಪುರ ಜಿಲ್ಲೆಯೊಂದರಲ್ಲೇ 5 ಲಕ್ಷ ಹೆಕ್ಟೇರ್‌ನಲ್ಲಿ ತೊಗರಿ ಬಿತ್ತಲಾಗಿದೆ. ”ತೊಗರಿ ಇಷ್ಟೊಂದು ಎತ್ತರಕ್ಕೆ ಯಾವತ್ತೂ ಬೆಳೆದಿಲ್ಲ. 7-8 ಅಡಿ ಎತ್ತರಕ್ಕೆ ಬೆಳೆದು ಸಾಕಷ್ಟು ಹೂವು ಬಿಟ್ಟರೂ ಅದಕ್ಕೆ ತಕ್ಕಂತೆ ಕಾಯಿ ಬಿಟ್ಟಿಲ್ಲ. ಕೃಷಿ ಇಲಾಖೆಯೇ ಕೊಟ್ಟ ಬೀಜವನ್ನು ಬಿತ್ತಲಾಗಿತ್ತು. ಕಾಯಿ ಕಾಳುಗಟ್ಟುವ ಮುನ್ನವೇ ಬೆಳೆ ಒಣಗಿದೆ,” ಎಂದು ರೈತರು ದೂರುತ್ತಿದ್ದಾರೆ. ಆದರೆ, ಕೆಲ ರೈತರು ಸಂಗ್ರಹಿಸಿಟ್ಟು ಬಿತ್ತಿದ್ದ ತೊಗರಿ ಬೀಜ ಉತ್ತಮ ಫಸಲು ಬಿಟ್ಟಿದೆ.
”ನಾವು ಶಿಫಾರಸು ಮಾಡಿದ ರೀತಿಯಲ್ಲಿ ಬಿತ್ತನೆ ಮಾಡಿಲ್ಲ, ಬೆಳೆ ನಿರ್ವಹಣೆ ಸರಿಯಾಗಿಲ್ಲ. ಅಲ್ಲದೆ, ವಿಪರೀತ ಚಳಿ ಹಾಗೂ ಇಬ್ಬನಿಂದಾಗಿ ಸರಿಯಾಗಿ ಕಾಯಿ ಬಿಟ್ಟಿಲ್ಲ,” ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.
ಮೂಲ: ವಿಜಯಕರ್ನಾಟಕ
“ಹಸುವಿನ ಗಂಜಲವನ್ನು ನೇರವಾಗಿ ಬೆಳೆಗಳಿಗೆ ಪೋಷಕಾಂಶವಾಗಿ ಪೂರೈಸಬಹುದೇ?
ಹಸುವಿನ ಗಂಜಲದಲ್ಲಿ ಪೋಷಕಾಂಶಗಳು ಹೇರಳವಾಗಿ ದೊರೆಯುತ್ತವೆ. ಹಸುಗಳಿಗೆ ತಿನ್ನಿಸುವ ಪೌಷ್ಟಿಕ ಮೇವು,ಬೂಸ/ಹಿಂಡಿ, ಖನಿಜಾಂಶಯುಕ್ತ ಆಹಾರಗಳ ಮೇಲೆ ಗಂಜಲದ ಪೋಷಕಾಂಶಗಳು ನಿರ್ಧಾರವಾಗಿರುತ್ತವೆ. ಗಂಜಲದ ರಸಸಾರ ಶೇ.1.56-6.70 ಪೋಷಕಾಂಶಗಳು ಲಭ್ಯವಿರುತ್ತವೆ.
ಉಪಯೋಗಿಸುವ ವಿಧಾನ:
ಹಸುವಿನ ತಾಜಾ ಗಂಜಲವನ್ನು ಶೇ.1.0 ದ್ರಾವಣ ಮಾಡಿ ನೇರವಾಗಿ ಬೆಳೆಗಳಿಗೆ ಸಿಂಪಡಣೆ ಮಾಡಬಹುದು. ಬೆಳೆಗಳಿಗೆ ನೀರಾಯಿಸುವಾಗ 1:10ರ ಅನುಪಾತದಲ್ಲಿ ನೇರವಾಗಿ ನೀರಿನೊಂದಿಗೆ ಕೊಡುವುದು.
ಸಾವಯವ ಗೊಬ್ಬರಗಳನ್ನು ತಯಾರಿಸುವಾಗ ಕೃಷಿ ತ್ಯಾಜ್ಯಗಳ ಮೇಲೆ ಗಂಜಲವನ್ನು ಚುಮುಕಿಸುವುದರಿಂದ ಗಂಜಲದ ಪೋಷಕಾಂಶಗಳು ಗೊಬ್ಬರದೊಂದಿಗೆ ಬೆರೆತು ಸಾವಯವ ಗೊಬ್ಬರಗಳು ಅಭಿವರ್ಧನೆಯಾಗುತ್ತವೆ. ದ್ರವರೂಪದ ಗೊಬ್ಬರಗಳಾದ ಬೀಜಾಮೃತ, ಜೀವಾಮೃತ, ಪಂಚಗವ್ಯ, ಸ್ಥಾವಕರುನಗೆಯೂ ಘಟಕದ ದ್ರಾವಣ, ದಸಗವ್ಯ, ಅಮೃತಪಾನಿಗಳ ತಯಾರಿಕೆಯಲ್ಲಿ ಗಂಜಲವನ್ನು ಬಳಸುವುದು