ಒಂದೇ ಕ್ಲಿಕ್ ನಲ್ಲಿ ಕಿಸಾನ್ ಸಮ್ಮಾನ್ ಯೋಜನೆಯ ಕುರಿತು ಮಾಹಿತಿ
ಪ್ರಧಾನ ಮಂತ್ರಿ ಕಿಸಾನ್ ಸಮಾನ್ ನಿಧಿ ಯೋಜನೆಯ ಫಲಾನುಭವಿಗಳಿಗೆ ಕೇವಲ ಒದೆರಡು ಕ್ಲಿಕ್ ನಲ್ಲಿ ಸುಲಭವಾಗಿ ಈ ಯೋಜನೆಯ ಅರ್ಜಿಯ ಇ-ಕೆವೈಸಿ ಸ್ಥಿತಿ ಮತ್ತು ಹಣ ಜಮಾ ವಿವರವನ್ನು ಪಡೆಯಲು ಮೊಬೈಲ್ ಅಪ್ಲಿಕೇಶನ್(PM-Kisan App) ಅನ್ನು ಕೇಂದ್ರದ ಕೃಷಿ ಇಲಾಖೆಯಿಂದ ಬಿಡುಗಡೆಗೊಳಿಸಲಾಗಿದೆ. ಪಿ ಎಂ ಕಿಸಾನ್ ಯೋಜನೆಯ(PM-Kisan) ಅರ್ಜಿಯ ಸ್ಥಿತಿ ಕುರಿತು ಮಾಹಿತಿಯನ್ನು ಪಡೆಯಲು ಯಾವುದೇ ಸರಕಾರಿ ಕಚೇರಿಯನ್ನು ಭೇಟಿ ಮಾಡದೇ ಈ ಒಂದು ಮೊಬೈಲ್ ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಅರ್ಜಿಯ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ. ಈ ಅಂಕಣದಲ್ಲಿ ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್(Kisan samman nidhi) ಅನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿಯನ್ನು ತಿಳಿಯುವುದು ಹೇಗೆ? ಮತ್ತು ಈ ಅಪ್ಲಿಕೇಶನ್ ನಲ್ಲಿ ಯಾವೆಲ್ಲ ಮಾಹಿತಿಯನ್ನು ಪಡೆಯಬಹುದು? …