ದಾಳಿಂಬೆಗೆ ಬಂಪರ್ ಬೆಲೆ: ಇಳುವರಿ ಕುಸಿತದ ನಡುವೆಯೂ ರೈತರಿಗೆ ಹರ್ಷ
ಬಳ್ಳಾರಿಯ 750 ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗುತ್ತದೆ. ಕುರುಗೋಡು ತಾಲ್ಲೂಕು ಒಂದರಲ್ಲೇ 520 ಹೆಕ್ಟೇರ್ ನಲ್ಲಿ ದಾಳಿಂಬೆ ಬೆಳೆಯಲಾಗುತ್ತದೆ. ಕಳೆದ ವರ್ಷ ದಾಳಿಂಬೆ ದರ ಕೆ.ಜಿಗೆ ₹80 ರಿಂದ ₹100 ಇತ್ತು.ಚಂಡಮಾರುತ ಮತ್ತು ಅಕಾಲಿಕ ಮಳೆಯಿಂದಾಗಿ ಗುಜರಾತ್, ರಾಜಸ್ತಾನ, ಮಹಾರಾಷ್ಟ್ರಗಳಲ್ಲಿ ಈ ಬಾರಿ ಇಳುವರಿ ಕುಸಿದಿದೆ. ಆದರೆ ಕರ್ನಾಟಕದಲ್ಲಿ ಸೂಕ್ತ ಸಮಯಕ್ಕೆ ವಿಜ್ಞಾನಿಗಳು ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ಸಲಹೆ ಮೇರೆಗೆ ರೈತರು ಉತ್ತಮ ರೀತಿಯಲ್ಲಿ ದಾಳಿಂಬೆ ಬೆಳೆದಿದ್ದಾರೆ . ಒಂದು ಹೆಕ್ಟೇರ್ ನಲ್ಲಿ ದಾಳಿಂಬೆ ಬೆಳೆಯಲು ಕನಿಷ್ಠ 2 ಲಕ್ಷ ವೆಚ್ಚ ತಗಲುತ್ತದೆ. ರೋಗ, ಕೀಟಬಾಧೆ ಕಾಡದಿದ್ದರೆ ಕನಿಷ್ಠ 20 ರಿಂದ 25 ಟನ್ ಇಳುವರಿ ಪಡೆಯಬಹುದು. ಕೇಜಿಗೆ ₹100 ದರ ಸಿಕ್ಕರೂ, 20 ರಿಂದ 25 ಲಕ್ಷ ಆದಾಯ ಗಳಿಸಬಹುದಾಗಿದೆ. …